Weight Loss Tips : ನಿತ್ಯ ಶುಂಠಿಯನ್ನು ಈ ರೀತಿ ಬಳಸಿದರೆ ಬಹುಬೇಗ Weight Loss ಮಾಡಿಕೊಳ್ಳಬಹುದು

ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು ಸೇವಿಸುವವರಿಗೆ ಬೇಗನೇ ಹಸಿವಾಗುವುದಿಲ್ಲ.  ಇದರಲ್ಲಿರುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಸಂಶೋಧನೆಯ ಪ್ರಕಾರ, ಶುಂಠಿ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

Written by - Ranjitha R K | Last Updated : Jun 24, 2021, 03:31 PM IST
  • ಶುಂಠಿಯಲ್ಲಿ ಅನೇಕ ಔಷಧೀಯ ಗುಣವಿರುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ
  • ಶುಂಠಿ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
Weight Loss Tips : ನಿತ್ಯ ಶುಂಠಿಯನ್ನು  ಈ ರೀತಿ ಬಳಸಿದರೆ ಬಹುಬೇಗ Weight Loss ಮಾಡಿಕೊಳ್ಳಬಹುದು title=
ಶುಂಠಿ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. (india.com)

ನವದೆಹಲಿ : ಶುಂಠಿಯನ್ನು (Ginger) ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಔಷಧೀಯ ಗುಣವಿರುತ್ತದೆ. ಶುಂಠಿಯನ್ನು ಚಹಾಕ್ಕೆ (Ginger tea) ಮಾತ್ರವಲ್ಲದೆ ಕೆಮ್ಮು, ಶೀತದಂತಹ ಕಾಯಿಲೆಗಳಿಗೂ ಪರಿಹಾರವಾಗಿ ಬಳಸಲಾಗುತ್ತದೆ. ಶುಂಠಿಯಿಂದ ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ.  ತಜ್ಞರ ಪ್ರಕಾರ, ಶುಂಠಿ ಸೇವನೆಯಿಂದ ತೂಕವನ್ನು ಕಡಿಮೆ (Ginger for weight loss)ಮಾಡಬಹುದು. 

ಹಾಗಿದ್ದರೆ ದೇಹ ತೂಕ ಕಡಿಮೆ ಮಾಡಿಕೊಳ್ಳಬೇಕಾದರೆ (Weight Loss Tips), ಶುಂಠಿಯನ್ನು ಸೇವಿಸುವ ಸರಿಯಾದ ಮಾರ್ಗವನ್ನು ಇಲ್ಲಿ ತಿಳಿಸಲಿದ್ದೇವೆ. 
ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು (Ginger) ಸೇವಿಸುವವರಿಗೆ ಬೇಗನೇ ಹಸಿವಾಗುವುದಿಲ್ಲ.  ಇದರಲ್ಲಿರುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level) ಸ್ಥಿರವಾಗಿರಿಸುತ್ತದೆ. ಸಂಶೋಧನೆಯ ಪ್ರಕಾರ, ಶುಂಠಿ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ : Hair Care Tips: ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ! ಹಾಲಿನ ಕೆನೆಯನ್ನು ಈ ರೀತಿ ಬಳಸಿ

ಹಾಗಿದ್ದರೆ ದೇಹ ತೂಕ ಕಡಿಮೆಮಾಡಲು ಶುಂಠಿಯನ್ನು ಯಾವ ರೀತಿ ಸೇವಿಸಬೇಕು ನೋಡೋಣ.. 
1.ಶುಂಠಿಯನ್ನು ನಿಂಬೆಯೊಂದಿಗೆ (Lemon) ಸೇವಿಸಬಹುದು. ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಮತ್ತು ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಇದನ್ನು ನಿರಂತರವಾಗಿ ಕುಡಿಯುತ್ತಾ ಬಂದರೆ ದೇಹ ತೂಕ ಕಡಿಮೆಯಾಗುತ್ತದೆ. 

2. ಶುಂಠಿ ಚಹಾ (ginger tea) ಅಥವಾ ಶುಂಠಿ ಡ್ರಿಂಕ್ ಗೆ ನಿಂಬೆ ರಸದ ಹನಿಗಳನ್ನು ಸೇರಿಸಿ.  ಈ ಪಾನೀಯವನ್ನು ದಿನಕ್ಕೆ ಎರಡು ಮೂರು ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ತ್ವರಿತವಾಗಿ ದೇಹ ತೂಕ ಕಡಿಮೆಯಾಗುತ್ತದೆ. 

3. ಆಪಲ್ ಸೈಡರ್ ವಿನೆಗರ್ ನಲ್ಲಿಯೂ ದೇಹ ತೂಕ ಕಡಿಮೆ ಮಾಡುವಂಥಹ ಗುಣಗಳಿರುತ್ತವೆ. ಶುಂಠಿಯೊಂದಿಗೆ ಇದನ್ನು ಬಳಸುವುದರಿಂದ ಅತ್ಯಂತ ಕಡಿಮೆ ಸಮಯದಲ್ಲಿ ದೇಹದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಮೊಡವೆಯಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News